ಬರೆಯುವೆ ನಿನಗಾಗಿ

ಚಿತ್ರ ಕೃಪೆ: ಗೂಗಲ್

ಸಂಜೆ  ೪ ರ ಸಮಯ, ಈ ಚಳಿನಲ್ಲಿ  ಬಿಸಿ ಬಿಸಿಯಾಗಿರೋ ಕಾಫಿ ಕುಡಿಯೋಣ ಅಂತ ಸೋಫಾ ಮೇಲಿಂದ ಎದ್ದೆ, ಫೋನ್  ರಿಂಗಾಯಿತು, ಮತ್ತೆ ಅವಳು ಕಾಲ್  ಮಾಡ್ತಾಳೆ ಅಂತ ಅಂದುಕೊಂಡಿರಲಿಲ್ಲ ,

ಕಾಲ್ ತಗೊಂಡೆ……

ನಾನು : ಈಗ ಹೇಗಿದ್ದೀಯ

ಅವಳು : ಹ್ಮ್o , ಊಟ ಆಯ್ತಾ

ಅವಳು ಯಾವಾಗಲು ಹಾಗೇನೆ ಕೇಳ ಬೇಕಾದುದನ್ನ ನೇರವಾಗಿ ಕೇಳ್ತಾ ಇರ್ಲಿಲ್ಲ

Hmm  ಅವಳೊಬ್ಬಳೆನೋ  ಅಥವಾ  ಹುಡುಗಿರೆಲ್ಲಾ ಹಾಗೇನೂ, ದೇವರೇ ಬಲ್ಲ………

ನಾನು : ಕಾಫಿ ಕುಡಿಯೋಣ ಅಂತ ಈಗ ತಾನೇ ಎದ್ದೆ

ಅವಳು : ಓಹ್ … ನಾನು  ತುಂಬಾ  ಲೇಟ್  ಆಗಿ  ಕೇಳ್ತಾಇದ್ದೀನಿ

ನಾನು : ಹಾಂ….  ತುಂಬಾನೆ  ಲೇಟ್  ಆಯಿತು,

(ಸ್ವಲ್ಪ ಸಮಯದ ನಂತರ )

ನಾನು : ಹಲೋ

ಅವಳು : ನನ್ನ ಫೋನ್ ನಂಬರ್ ಬದಲಾಯಿಸಿತ ಇದ್ದೀನಿ, ಹೊಸ ನಂಬರ್ ……

ನಾನು : ಮನಸನ್ನೇ ಬದಲಾಯಿಸಿದ ಮೇಲೆ, ಫೋನ್ ನಂಬರ್ ಯಾವ  …

ಮಾತನ್ನ ಮಧ್ಯದಲ್ಲೇ ನಿಲ್ಲಿಸಿದೆ,  ಮುಂದುವರಿಸೋಕು ಇಷ್ಟ ಇರಲ್ಲಿಲ , ಅವಳ ಹೊಸ ನಂಬರ್ ಕೇಳೋ ಗೋಜಿಗೆ ಹೋಗಲಿಲ್ಲ ಆದರೂ ಫೋನ್ ಕಟ್ ಮಾಡೋದು ಸರಿ ಇರಲ್ಲ ಅಂತ

ನಾನು : “ಕಾಫಿ  ಆಯ್ತಾ….”  ಅಂತ ಕೇಳಿದೆ

ಅವಳಿಂದ ಯಾವುದೇ ಉತ್ತರ ಕೂಡ ಬರಲಿಲ್ಲ, ಬಹುಶಃ ಅದೇ ಅವಳ ಕೊನೆ ಕರೆ ಅಂತ ಅಂದು ಕೊಂಡಿರಲಿಲ್ಲ.

…………

“ಹೇಯ್  ಕಾಫಿ  ಕೊಟ್ಟು  ಎಷ್ಟು  ಹೊತ್ತು  ಆಯಿತು, ಇನ್ನು ಕುಡಿದಿಲ್ವ” ಅಂದಳು  ಅಮ್ಮ .

ಓಹ್  ಹಳೆ ನೆನಪು, ಛೇ  ಕಾಫಿ ಆರಿಹೋಗಿದೆ……

Advertisements

ಮುಂಜಾನೆಯ  ಮಂಜು..
ಬೆಳಗಿನ ಚುಮು ಚುಮು ಚಳಿ..
ಹಸಿರು ಹುಲ್ಲು ಹಾಸಿನ ಮೇಲೆ ಇಬ್ಬನಿಯ ಹನಿಗಳು..
ಸೂರ್ಯ ಕೂಡ ಮೋಡದ ಮರೆಯಲ್ಲಿ ಬೆಚ್ಹಗೆ ಮಲಗಿದ್ದಾನೆ….
ಅವಳ ನೆನಪುಗಳ ಹೊದಿಕೆಯಲ್ಲಿ ಮೈಮುದುಡಿ ಮಲಗಿರುವೆ..
ಬೆಳಗಾಯಿತೇಕೆ…??

(in complete)

ಬಾಲ್ಯದ ನೆನಪುಗಳು ಯಾರಿಗೆ ತಾನೆ ಮರೆಯೋಕೆ ಆಗುತ್ತೆ, ಆ ಹುಡುಗಾಟದ ದಿನಗಳು, ಆಗ ನಾವು ಆಡ್ತಿದ್ದ ಆಟ, ಒಂದೇ ಎರಡೇ ಆ ಹುಡುಗಾಟಕ್ಕೆ ಕೊನೆಯೇ ಇಲ್ಲ. ಸದಾ ಹಚ್ಚ ಹಸಿರಾಗಿ ಈಗಲೂ ನಮ್ಮ ಕಣ್ಣ ಮುಂದೆ ಬರುತ್ತೆ.  ಆ ನೆನಪುಗಳನ್ನ ಮೆಲಕು ಹಾಕೋದೆ ಒಂಥರ   ಖುಷಿ.

ಬಾಲ್ಯದ ಆಟ ಅಂದ ತಕ್ಷಣ ಒಂದು ಪ್ರಸಂಗ ನೆನಪಿಗೆ ಬರುತ್ತೆ, ಆ ಒಂದು ಪ್ರಸಂಗವನ್ನ ಇಲ್ಲಿ  ನೆನಪಿಸಿಕೊಳ್ತ ಇದ್ದೀನಿ.
ಆಗ ನಾನು ೬ ನೇ ಕ್ಲಾಸ್ ನಲ್ಲಿ ಓದ್ತಾ ಇದ್ದೆ, ಸಂಜೆ ಸ್ಕೂಲ್ ಬಿಟ್ಟ ತಕ್ಷಣ ಮನೆಗೆ ಬರೋದೇ ತಡ ಬ್ಯಾಗನ್ನ ಮೂಲೆಗೆ ಎಸೆದು, ಅಮ್ಮ ಏನ್ ತಿಂಡಿ ಮಾಡಿದ್ದಾಳೆ ಅಂತ ಅಡುಗೆಮನೆ ಡಬ್ಬಿನೆಲ್ಲಾ ಹುಡುಕದೆ   ಇದ್ದರೆ ಸಮಾಧಾನನೇ ಇರೋಲ್ಲ, ಇನ್ನು ನಾನು ಏನಾದ್ರು ಬಿಳಿಸೋದು.. ಅಮ್ಮ  ಬರೋದು.. ಅಲ್ಲಿಂದ  escape ಆಗೋದು ಇದೆಲ್ಲ ಮಾಮೂಲಿ ಅಗ್ಬಿಟ್ಟಿತು. ಆಮೇಲೆ ಡ್ರೆಸ್ ಚೇಂಜ್ ಮಾಡಿ ಆಡೋದಕ್ಕೆ ಹೊರಟರೆ  ಮತ್ತೆ ಮನೆಗೆ ಬರೊಅಸ್ಟೊತಿಗೆ ಆಕಾಶದಲ್ಲಿ ಚಂದ್ರ ನಕ್ಷತ್ರಗಳ ಜೊತೆ ತನ್ನ ಆಟ ಶುರು ಮಾಡ್ ಬಿಟ್ಟಿರುತಾನೆ.

ಎಂದಿನಂತೆ ಅವತ್ತು ಸ್ಕೂಲ್ ಬಿಟ್ಟ ಮೇಲೆ ಇದ್ದ ನಾಲ್ಕು ಗೋಲಿನ ಜೋಬಲ್ಲಿ ಹಾಕೊಂಡು, ಸೊಂಟದಿಂದ  ಜಾರುತ್ತಾ ಇದ್ದ ಚೆಡ್ಡಿಗೆ ಉಡದಾರ ಬಿಗಿದು ಆಡೋದಕ್ಕೆ ಹೊರಟೆ.
ಅಂದ ಹಾಗೆ ಗೋಲಿ ಆಟದಲ್ಲಿ  ನಂದು ‘ಎತ್ತಿದ ಕೈ’ ಅದು ಎಷ್ಟರ ಮಟ್ಟಿಗೆ ಅನ್ನೋದು ಈ ಪ್ರಸಂಗದ  ಕೊನೆಯಲ್ಲಿ ನಿಮಗೆ ಗೊತ್ತಾಗುತ್ತೆ.
ಮಾಮೂಲಾಗಿ ನಾವೆಲ್ಲ ರಾಮು ಮನೆಯತ್ರ ಗೋಲಿ ಆಡ್ತಾ ಇದ್ದ್ವಿ.

ಎಂದಿನಂತೆ ನಾನು ರಾಮು, ಅನಿಲ  ಎಲ್ಲ ಗೋಲಿ ಆಟ ಶುರು ಮಾಡಿದ್ವಿ ಅವತ್ ನಮ್ ಗೋಲಿ ಚಾಂಪಿಯನ್  ಸುನಿಲ ಬಂದಿರಲ್ಲಿಲ, ಅಂದ ಮೇಲೆ ಏನಿದ್ರು ಎಲ್ಲ ನಂದೆ ಕಾರ್ಬಾರು. ಎಂದು ಗೆಲ್ಲ್ ದೇ ಇದ್ದ ನಾನು ಅವತ್ತು  ಫುಲ್ ಆಟನೇ ಧೂಳಿಪಟ  ಮಾಡ್ಬಿಟ್ಟಿದ್ದೆ.
ಚೆಡ್ಡಿಯ ಎರಡು ಜೋಬು ಗೋಲಿಗಳ ಖಜಾನೆನೆ ಆಗಿಬಿಟ್ಟಿತು. ಎಲ್ಲರಿಗು ನನ್ ಜೋಬಿನ ಮೇಲೆ ಕಣ್ಣು.

ಇಂಡಿಯಾ ವರ್ಲ್ಡ್ ಕಪ್ ಗೆದ್ದಗಾಗೋ ಸಂತೋಷ ಅಷ್ಟೊಂದು ಗೋಲಿ ಗೆದ್ದ್ ಬಿಟ್ಟಿದೆ. ಆದ್ರೆ ಇನ್ನು ಹೆಚ್ಚಿಗೆ ಹೊತ್ತು ಆಟ ಆಡಿದರೆ ಎಲ್ಲಿ ಗೆದ್ದಿರ ಗೋಲಿ ಕಳ್ಕೊತಿನೋ ಅನ್ನೋ ಭಯ. ಏನಾದ್ರು ಮಾಡಿ ಅಲ್ಲಿಂದ ಆದಷ್ಟು ಬೇಗ ಕಳಚಿಕೊಳಬೇಕಿತ್ತು.

ಅದಕ್ಕೆ ನಾನು “ಮನೆಯಲ್ಲಿ ಯಾರೋ ಬಂದಿದ್ದಾರೆ urgent ಹೋಗಬೇಕು…” ಅಂತ ಹೇಳ್ತಾ ಇದ್ದಾಗೆ ಎಲ್ಲರು  ಸುತ್ತಲು ಕವರ್ ಆಗ್ಬಿಡೋದ,  ಒಬೋಬ್ಬನು ಹಾಗೆ ಗುರಾಯಿಸ್ಥ ಇದ್ದಾನೆ..  ಇನ್ನೇನು war start ಆಗೋದೊಂದೆ ಬಾಕಿ ಹಾಗಿತ್ತು ಅವರ ನೋಟ.

ಅಷ್ಟರಲ್ಲಿ ರಾಮು “ಆಟ ಆಡು ಇಲ್ಲ ಗೆದ್ದಿರೋ ಗೋಲಿ ಎಲ್ಲ ಕೊಟ್ಟು ಹೋಗು” ಅಂತ ಹೇಳ್ದ,  ಬೇರಯವರು ಅವನ್ ಮಾತಿಗೆ ಹೌದು ಹೌದು ಅಂತಿದ್ದ ಹಾಗೆ , ವಿಜಿ ಮತ್ತೆ ಕಿರಣ ನನ್ನ ಹಿಡ್ಕೊಂಡು ಆಟ  ಆಡದಿದ್ರೆ ಗೋಲಿ ಕಿತ್ಕೊಂಡು ಕಳಿಸೋಣ ಅಂತ ಹೇಳಿದ್ರು. ಅಷ್ಟರಲ್ಲಿ ಎಲ್ಲಿ ಹಾಳಾಗಿ ಹೋಗಿದ್ನೋ ಸುನಿಲ  ಬಂದಿಬಿಡೋದ… ನಮ್ ಜಗಳದಲ್ಲಿ ಒಳ್ಳೆ ಹೀರೋ ಎಂಟ್ರಿ ಥರ ಇತ್ತು ಅವನದು,  ಎಲ್ಲರ ಮುಖದಲ್ಲಿ ಸಂತೋಷಕ್ಕೆ ಪಾರವೇ ಇಲ್ಲ. ಏನ್ ಮಾಡೋದು ಆಟ ಆಡದೆ ಬೇರೆ  ವಿಧಿನೇ ಇರ್ಲಿಲ್ಲ. ಎರಡೇ ಆಟದಲ್ಲಿ ಇವನ್ನ ಸೋಲಿಸಿ ಇವನು ಗೆದ್ದಿರೋ ಗೋಲಿನೆಲ್ಲ ಉಡಿಸ್ ಮಾಡೋಣ  ಅಂತ ಬೇರೆ ಹೇಳಿದ ಸುನಿಲ. ನನಗೋ ಮನೆಯಿಂದ ತಂದಿರೋ ನಾಲ್ಕು ಗೋಲಿನ ತಗೊಂಡು ಹೋದ್ರೆ  ಸಾಕು ಅನ್ಸಿಬಿಟ್ಟಿತು.

ಅಷ್ಟರಲ್ಲಿ ನಾನು ಕತ್ತಲಾಗಿ ಬಿಟ್ಟಿದೆ ನಾಳೆ ಆಡೋಣ ಅಂತ ಹೇಳ್ದೆ, ಅದಕ್ಕೆ ಎಲ್ಲರು ಸುನಿಲನ ಮನೆಯತ್ರ ಇರೋ ಲೈಟ್ ಕಂಬದ ಹತ್ರ ಆಡೋಣ ಅಂತ ಎಳ್ಕೊಂಡು ಹೋದ್ರು. ನಂಗೆ ಬಂಧಿರೋ ಕೋಪಕ್ಕೆ ಎಲ್ಲರನು ಒಂದ್  ಕೈ ನೋಡ್ಕೊಳೋಣ ಅಂದ್ರೆ.. ಮೊದಲೇ ಮೈಕ್ ಟೈಸನ ಬಾಡಿನಂದು ಇಲ್ಲ ಅಂದ್ರೆ ಕಥೆನೇ ಬೇರೆ ಮಾಡ್ ಬಿಟಿರ್ತ ಇದ್ದೆ.

ಇನ್ನು ಆ ಲೈಟ್ ಕಂಬ ಸುನಿಲನ ಹೋಂ ಪಿಚ್ ಬೇರೆ ಇಂಡಿಯಾದೊರು ಹಾಲೆಂಡ್ ಕೀನ್ಯ ಮೇಲೆ  ಗೆದ್ದಂಗೆ  , ನೀರು ಕುಡಿದಂಗೆ ನಾನ್ ಗೆದ್ದಿರೋ ಗೋಲಿನೆಲ್ಲ ಗೆದ್ದ್ ಬಿಡ್ತಿದ್ದ .

ಇನ್ನು ನಮ್ ಫೈನಲ್ ಮ್ಯಾಚ್ ಶುರು ಆಗ್ಬೇಕು ಅಷ್ಟರಲ್ಲಿ ನಮ್ MSN ಮೇಸ್ಟ್ರು ವಾಕಿಂಗ್ ಮುಗಿಸ್ಕೊಂಡು  ಅದೇ ದಾರಿಯಲ್ಲಿ ಮನೆ ಕಡೆ ಹೊರಟಿದ್ರು. ಕತ್ತಲಾದ್ರು ನಾವು ಗೋಲಿ ಆಡ್ತ ಇರೋದು ನೋಡಿದ್ರೆ ನಾಳೆ  ಕ್ಲಾಸ್ ನಲ್ಲಿ ನಮ್ನೆಲ್ಲ  ‘ಗೋಲಿ’ ಬಾರ್ ಮಾಡೋದು ಗ್ಯಾರಂಟೀ.

MSN ಮೇಸ್ಟ್ರುನ ನೋಡಿದ್ದೇ ತಡ ಎಲ್ಲರು ಒಂದ್ ಒಂದು ಕಡೆ escape…. ಇನ್ನು ನಮ್ದು  ಮೊದಲೇ  ಎತ್ತಿದ ಕೈ ಅಂತ ನಿಮಗೆ ಗೊತಲ್ವ ಸಿಕ್ಕಿದೆ ಚಾನ್ಸ್ ಗೋಲಿ ಖಜಾನೆ ಸಮೇತ ಮನೆ ಕಡೆ ಪರಾರಿ…


ರಾತ್ರಿ ಸುಮಾರು ಒಂಬತ್ತರ ಸಮಯ ತುಂತುರು ಮಳೆ …

ಆ ಮಳೆಯಲ್ಲಿ ಹಾಡೊಂದನ್ನು ಗುನುಗುತ Airport ರಸ್ತೆಇಂದ  ಮನೆಯಕಡೆ ಹೊರಟ್ಟಿದ್ದೆ. ಮಳೆ ಇರೋದಿಂದ್ರನೋ ಏನೂ ಆಗಲೇ ಬೆಂಗಳೂರಿನ ರಸ್ತೆಗಳಿಗೆ ಮಲಗುವ ಸಮಯ ಬಂದಹಾಗೆ  ಹಾಗಿತ್ತು …. ಚಿನ್ನಸ್ವಾಮಿ stadium ಹತ್ತಿರದ ಟ್ರಾಫಿಕ್ ಸಿಗ್ನಲ್  ನಲ್ಲಿ  ಗಾಡಿ ನಿಲ್ಲಿಸಿದೆ, ಗ್ರೀನ್ ಲೈಟ್ ಗೋಸ್ಕರ ಎರಡು ನಿಮಿಷ ಕಾಯಲೇ  ಬೇಕಿತ್ತು.

ಗಾಡಿ mirror ಮೇಲೆ ಬಿದ್ದ  ಮಳೆ ಹನಿಗಳು ದೀಪದ ಬೆಳಕಿಗೆ ಮುತ್ತಿನ ತರಹ ಹೊಳಿತಿತ್ತು, ಹಾಗೆ ಆ ಮುತ್ತುಗಳನ್ನ  ಒರೆಸುತ್ತ mirrorನ adjust ಮಾಡಿದೆ.

ಸ್ವಲ್ಪ shock ಆಯಿತು… mirrorನ ಮತ್ತೊಮ್ಮೆ  ಒರೆಸಿ ನೋಡಿದೆ, ಮುಂಜಾನೆಯ ಆ ಮಂಜಿನ ಹನಿಗಳು ಗುಲಾಬಿ ಹೂವಿನ ಮೇಲೆ ಬಿದ್ದ ಹಾಗೆ,  ತುಂತುರು ಮಳೆಯ ಮುತ್ತಿನ  ಹನಿಗಳು ಅವಳ ಮುಖದ ಮೇಲೆ…  ಓಹ್ ಇನ್ನು ವರ್ಣಿಸಲು ಅಸಾಧ್ಯ!!! ಕ್ಷಣಕಾಲ ಹಾಗೆ Heart ನ ಟಚ್ ಮಾಡಿದಳು. …. ಗಾಡವಾಗಿ ತೀಡಿದ ಅವಳ  ಹುಬ್ಬುಗಳು, ಏನನ್ನೋ ಹೇಳಲು ಹೊರಟಂತಿರುವ ಆ ಕಣ್ಣುಗಳು…. ohh ಆಗಲೇ ಸಿಗ್ನಲ್ ಬಿಟ್ಟಿತು, ನೋಡಿ ಬೆಂಗಳೂರಿನಲ್ಲಿ ನಾನೊಬ್ಬನೇ ಇರಬೇಕು ಸಿಗ್ನಲ್ ಇಷ್ಟು ಬೇಗ ಬಿಟ್ಟಿತು ಅಂತ ಹೇಳಿದ್ದು, ಮತ್ತೊಮ್ಮೆ mirror ನೋಡಿದೆ, ನನ್ನ ಕಣ್ಣುಗಳು ಎಲ್ಲ ರಸ್ತೆ, ಗಾಡಿಗಳ್ಳನ್ನು  scan ಮಾಡಿದ್ರು ಅವಳು ಎಲ್ಲಿ ಮರೆಯಾದಳು ಅಂತ ಗೊತ್ತಾಗಲೇ ಇಲ್ಲ…. ಎಲ್ಲ ಗ್ರೀನ್ ಸಿಗ್ನಲ್ ಗಾಗಿ ಕಾಯ್ತಾರೆ, ಆದರೆ ನಾನು ರೆಡ್ ಸಿಗ್ನಲ್ ಗಾಗಿ ಅವಳನ್ನ ಕಾಯ್ತಾ ಇದ್ದೀನಿ, ಮತ್ತೊಮ್ಮೆ ಆ ತುಂತುರು ಮಳೆಯ ಟ್ರಾಫಿಕ್ ಸಿಗ್ನಲ್ ನಲ್ಲಿ  ಸಿಕ್ತಾಳ?

Welcome to WordPress.com. This is your first post. Edit or delete it and start blogging!


  • ಯಾವುದೂ ಇಲ್ಲ

ವಿಭಾಗಗಳು