Posted by: UMI on: July 24, 2010
ಸಂಜೆ ೪ ರ ಸಮಯ, ಈ ಚಳಿನಲ್ಲಿ ಬಿಸಿ ಬಿಸಿಯಾಗಿರೋ ಕಾಫಿ ಕುಡಿಯೋಣ ಅಂತ ಸೋಫಾ ಮೇಲಿಂದ ಎದ್ದೆ, ಫೋನ್ ರಿಂಗಾಯಿತು, ಮತ್ತೆ ಅವಳು ಕಾಲ್ ಮಾಡ್ತಾಳೆ ಅಂತ ಅಂದುಕೊಂಡಿರಲಿಲ್ಲ ,
ಕಾಲ್ ತಗೊಂಡೆ……
ನಾನು : ಈಗ ಹೇಗಿದ್ದೀಯ
ಅವಳು : ಹ್ಮ್o , ಊಟ ಆಯ್ತಾ
ಅವಳು ಯಾವಾಗಲು ಹಾಗೇನೆ ಕೇಳ ಬೇಕಾದುದನ್ನ ನೇರವಾಗಿ ಕೇಳ್ತಾ ಇರ್ಲಿಲ್ಲ
Hmm ಅವಳೊಬ್ಬಳೆನೋ ಅಥವಾ ಹುಡುಗಿರೆಲ್ಲಾ ಹಾಗೇನೂ, ದೇವರೇ ಬಲ್ಲ………
ನಾನು : ಕಾಫಿ ಕುಡಿಯೋಣ ಅಂತ ಈಗ ತಾನೇ ಎದ್ದೆ
ಅವಳು : ಓಹ್ … ನಾನು ತುಂಬಾ ಲೇಟ್ ಆಗಿ ಕೇಳ್ತಾಇದ್ದೀನಿ
ನಾನು : ಹಾಂ…. ತುಂಬಾನೆ ಲೇಟ್ ಆಯಿತು,
(ಸ್ವಲ್ಪ ಸಮಯದ ನಂತರ )
ನಾನು : ಹಲೋ
ಅವಳು : ನನ್ನ ಫೋನ್ ನಂಬರ್ ಬದಲಾಯಿಸಿತ ಇದ್ದೀನಿ, ಹೊಸ ನಂಬರ್ ……
ನಾನು : ಮನಸನ್ನೇ ಬದಲಾಯಿಸಿದ ಮೇಲೆ, ಫೋನ್ ನಂಬರ್ ಯಾವ …
ಮಾತನ್ನ ಮಧ್ಯದಲ್ಲೇ ನಿಲ್ಲಿಸಿದೆ, ಮುಂದುವರಿಸೋಕು ಇಷ್ಟ ಇರಲ್ಲಿಲ , ಅವಳ ಹೊಸ ನಂಬರ್ ಕೇಳೋ ಗೋಜಿಗೆ ಹೋಗಲಿಲ್ಲ ಆದರೂ ಫೋನ್ ಕಟ್ ಮಾಡೋದು ಸರಿ ಇರಲ್ಲ ಅಂತ
ನಾನು : “ಕಾಫಿ ಆಯ್ತಾ….” ಅಂತ ಕೇಳಿದೆ
ಅವಳಿಂದ ಯಾವುದೇ ಉತ್ತರ ಕೂಡ ಬರಲಿಲ್ಲ, ಬಹುಶಃ ಅದೇ ಅವಳ ಕೊನೆ ಕರೆ ಅಂತ ಅಂದು ಕೊಂಡಿರಲಿಲ್ಲ.
…………
“ಹೇಯ್ ಕಾಫಿ ಕೊಟ್ಟು ಎಷ್ಟು ಹೊತ್ತು ಆಯಿತು, ಇನ್ನು ಕುಡಿದಿಲ್ವ” ಅಂದಳು ಅಮ್ಮ .
ಓಹ್ ಹಳೆ ನೆನಪು, ಛೇ ಕಾಫಿ ಆರಿಹೋಗಿದೆ……
Heart Touching …Nice writeup..I like your blog:-)
July 26, 2010 at 6:56 am
chenagide nimma coffee kudiyuva pari….
yen sir, avara nenapu bari chali kaaladalli maathra barutha???
July 26, 2010 at 7:19 am
Hey aa thara yaaru illa kano
.. eege bahala dina aayithala aadakke blog update maadidhe .